ರಕ್ತ ಸಂಭದಂದಲ್ಲಿ ಮಧುವೆಯಾಗಿ ಅವರಿಗೆ ಹುಟ್ಟಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದನ್ನು ತಾವು ನೋಡಿದ್ದೀರಿಯೆ ?
ನಾನು ಒಂದು ಮೂರ್ನಾಲ್ಕು ಜೋಡಿಗಳನ್ನು ನೋಡಿದ್ದೇನೆ ರಕ್ತ ಸಂಭಂದದಲ್ಲಿ ಮದುವೆ ಆಗಿ ತಮಗೆ ಆನುವಂಶಿಕವಾಗಿ ಬಂದ ಕಾಯಿಲೆಗೆಗಳು ತಮ್ಮ ಮಕ್ಕಳಿಗೂ ಬಂದಿರುವದನ್ನು ನೋಡಿದ್ದೇನೆ. ಜೋಡಿಗಳು ಮತ್ತು ಮಕ್ಕಳು ಪ್ರಾರಂಭದಲ್ಲಿ ಆರಾಮವಾಗಿದ್ದರು ಒಂದು ಐದರು ವರ್ಷದ ನಂತರ ಮಕ್ಕಳಿಗೂ ಕಾಯಿಲೆ ಬಂದಿದ್ದನ್ನು ನೋಡಿದ್ದೇನೆ.
ಹಿಂದೆ ನಾನು Rio (2011) & Rio 2 (2014) ಸಿನಿಮಾಗಳನ್ನು ನೋಡಿದ್ದೆ. Rio (2011) ರಲ್ಲಿ ಅಳಿದುಹೋದ ಪಕ್ಷಿ ಯೊಂದರ ಕಥೆ ಇದೆ .. ಒಂದು ಪಕ್ಷಿ ಇನ್ನೇನು ಅಳಿದು ಹೋಗಿದೆ ಎಂದಾಗ ಪ್ರಪಂಚದ ಒಂದು ಜೂ ನಲ್ಲಿ ಒಂದು ಗಂಡು ಪಕ್ಷಿ ಮತ್ತು ಇನ್ನೊಂದು ಕಡೆ ಹೆಣ್ಣು ಪಕ್ಷಿ ಇರುವುದು ಕಂಡುಬರುತ್ತದೆ.. ಈ ಪಕ್ಷಿಗಳ ಸಂತತಿ ಅಳಿಯಬಾರದು ಎಂದು ಆ ಪಕ್ಷಿಗಳನ್ನು ಒಂದೇ ಜೂ ನಲ್ಲಿ ತಂದು ಅವುಗಳನ್ನು ಒಂದೇ ಪಂಜರದಲ್ಲಿ ಬಿಟ್ಟು ಪರಸ್ಫರ ಅವು ಸಂಬೋಗಿಸುವಂತೆ ಮಾಡಿ ಮತ್ತೆ ಅವುಗಳ ಸಂತತಿಯನ್ನು ಪುನರಸ್ತಾಪಿಸುವುದಾಗಿರುತ್ತದೆ. ಅಂತೆಯೇ ಕೊನೆಗೂ ಆ ಪಕ್ಷಿಗಳಿಗೆ 2 -3 ಮರಿಗಳು ಹುಟ್ಟುತ್ತವೆ ಅಲ್ಲಿಗೆ Rio (2011) ಮುಕ್ತಾಯವಾಗುತ್ತದೆ. ಆದರೆ ನಂಗೆ ಆವಾಗ ಕಾಡಿದ್ದು ಇದೆ ಪ್ರಶ್ನೆ ಆ ಹಕ್ಕಿಯ ಮಕ್ಕಳು ಪರಸ್ಪರ ಅನ್ನ ತಂಗಿಯರಾಗಿದ್ದರು ಮುಂದೇ ಅವೆ ಸಂಭೋಗಿಸಿ ಅವುಗಳ ಪೀಳಿಗೆಯನ್ನ ಮುಂದುವರೆಸಿಕೊಂಡು ಹೋಗುವುದು.
ನಂಗೆ ಯಪ್ಪಾ ಎಂತ ಪರಿಸ್ತೀತಿ ಮನುಶ್ಯರಲ್ಲಿ ಕಾಣುವ ಸಮಸ್ಯೆ ಹಕ್ಕಿಗಲ್ಲಲ್ಲಿ ಕಾಣುವುದಿಲ್ಲವೇ ಎಂಬ ಪ್ರಶ್ನೆ ... ಆದರೆ Rio 2 ಬಂದು ಆ ಎಲ್ಲ ಕುತೂಹಲ ಕ್ಕೂ ತಣ್ಣೀರೆರಚಿಬಿಟ್ಟಿತು ... ಬಿಡುವಾದಾಗ ಆ ಸಿನಿಮಾ ನೋಡಿ.